1. ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ನೇತೃತ್ವ ವಹಿಸಿದ್ದವರು ಯಾರು?
A. ಪ್ರೊ. ಕೆ. ಕಸ್ತೂರಿರಂಗನ್
B. ಪ್ರೊ. ಸುಖದೇವ್ ಥೋರಟ್
C. ಪ್ರೊ. ಸಿ.ಎನ್.ಆರ್. ರಾವ್
D. ಪ್ರೊ. ರಾಜೀವ್ ಗೌಡ
2. ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. ಈ ಯೋಜನೆಯು 2026ರ ಮಾರ್ಚ್ 31ರಂದು ಪ್ರಾರಂಭವಾಯಿತು ಮತ್ತು 2028ರ ಮಾರ್ಚ್ 31ರಂದು ಮುಕ್ತಾಯಗೊಳ್ಳುತ್ತದೆ.
B. ಇದು ಕೇವಲ ಇ-2 ಚಕ್ರದ ವಾಹನಗಳು ಮತ್ತು ಇ-ಬಸ್ಗಳಿಗೆ ಮಾತ್ರ ಅನ್ವಯವಾಗುತ್ತದೆ.
C. ಯೋಜನೆಯ ವಿಸ್ತರಣಾ ಅವಧಿಗೆ ಕೇಂದ್ರ ಸರ್ಕಾರವು ₹10,900 ಕೋಟಿ ಅನುದಾನವನ್ನು ಮೀಸಲಿರಿಸಿದೆ
D. ಈ ಯೋಜನೆಯು ಖಾಸಗಿ ಮತ್ತು ಕಾರ್ಪೊರೇಟ್ ಮಾಲೀಕತ್ವದ ವಾಹನಗಳಿಗೆ ಅನ್ವಯಿಸುವುದಿಲ್ಲ.
3. 2024-25ರ ಆರ್ಥಿಕ ವರ್ಷದ ಅಂಕಿ-ಅಂಶಗಳ ಪ್ರಕಾರ, ರಫ್ತು ಪ್ರಮಾಣದಲ್ಲಿ ಭಾರತದ ರಾಜ್ಯಗಳ ಸರಿಯಾದ ಅನುಕ್ರಮ ಯಾವುದು?
A. ಗುಜರಾತ್ > ಮಹಾರಾಷ್ಟ್ರ > ತಮಿಳುನಾಡು > ಕರ್ನಾಟಕ
B. ಗುಜರಾತ್ > ಮಹಾರಾಷ್ಟ್ರ > ಕರ್ನಾಟಕ > ತಮಿಳುನಾಡು
C. ಮಹಾರಾಷ್ಟ್ರ > ಗುಜರಾತ್ > ತಮಿಳುನಾಡು > ಕರ್ನಾಟಕ
D. ಗುಜರಾತ್ > ತಮಿಳುನಾಡು > ಮಹಾರಾಷ್ಟ್ರ > ಕರ್ನಾಟಕ
4. ಭಾರತದ ಮೊದಲ 1 ಮೆಗಾ ವ್ಯಾಟ್ ಸಾಮರ್ಥ್ಯದ ಹಸಿರು ಹೈಡ್ರೋಜನ್ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಗಿದೆ?
A. ದೀನದಯಾಳ್ ಬಂದರು, ಗುಜರಾತ್
B. ಮುಂಬೈ ಬಂದರು, ಮಹಾರಾಷ್ಟ್ರ
C. ಪ್ಯಾರಾದೀಪ್ ಬಂದರು, ಒಡಿಶಾ
D. ವಿಶಾಖಪಟ್ಟಣಂ ಬಂದರು, ಆಂಧ್ರ ಪ್ರದೇಶ
5. ಬಾಲಕಿಯರ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ‘ಮುಖ್ಯ ಮಂತ್ರಿ ನಿಜತ್ ಮೊಯಿನಾ 2.0’ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
A. ಒಡಿಶಾ
B. ಅಸ್ಸಾಂ
C. ಪಶ್ಚಿಮ ಬಂಗಾಳ
D. ಬಿಹಾರ